ನೀಲಶಂಕರ್ ಅವರು ನಿರ್ಮಿಸುತ್ತಿರುವ ‘ಕಾಫ಼ಿ ವಿತ್ ಮೈ ವೈಫ಼್‘ ಚಿತ್ರಕ್ಕೆ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಜನವರಿ ಹದಿನೈದರಿಂದ ಹಾಡುಗಳ ಚಿತ್ರೀಕರಣ ಆರಂಭವಾಗಲಿದೆ.
ಮದನ್ ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರವನ್ನು ವಿದ್ಯಾಸಾಗರ್ ನಿರ್ದೇಶಿಸುತ್ತಿದ್ದಾರೆ. ನೃತ್ಯ ನಿರ್ದೇಶನವನ್ನು ವಿದ್ಯಾಸಾಗರ್ ಅವರೇ ಮಾಡುತ್ತಿದ್ದಾರೆ. ಆನಂದ್ ಸಂಗೀತ ನಿರ್ದೇಶನದ ‘ಕಾಫ಼ಿ ವಿತ್ ಮೈ ವೈಫ಼್‘ಗೆ ವಿಶ್ವ ಅವರ ಛಾಯಾಗ್ರಹಣವಿದೆ. ಎನ್.ಚಂದ್ರಶೇಖರ್ ಹಾಗೂ ಮಂಜಯ್ಯರ ನಿರ್ಮಾಣ ನಿರ್ವಹಣೆ ಈ ಚಿತ್ರಕ್ಕಿದೆ.
ಅನೀಶ್ ನಾಯಕರಾಗಿ ನಟಿಸುತ್ತಿರುವ ಈ ಚಿತ್ರದ ನಾಯಕಿ ಸಿಂಧೂಲೋಕನಾಥ್. ಕುಮುದ, ಪದ್ಮಿನಿ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸುತ್ತಿರುವ ಕಲಾವಿದರು.